ಚೋರ ಚರಣದಾಸ ನಾಟಕದ ಸಾರಾಂಶ

ಇದು ಒಬ್ಬ ಕಳ್ಳನ ಕಥೆ. ಇದರಲ್ಲಿ ಬರುವ ಮುಖ್ಯ ಪಾತ್ರ ಒಬ್ಬ ಕಳ್ಳನದ್ದು. ಅವನೇ ನಾಯಕ.. ಅವನೇ ಈ ಚರಣದಾಸ.

ಇದೊಂದು ರಾಜಸ್ಥಾನಿ ಜಾನಪದ ಕಥೆ. ಇದನ್ನು ಮೂಲವಾಗಿ ನಿರೂಪಣೆ ಮಾಡಿದವರು “ವಿಜಯದನ್ ದೇತಾ“.

ಹಬೀಬ್ ತನ್ವಿರ್” ರವರು ಇದನ್ನು ರಂಗಭೂಮಿ ಶಾಸ್ತ್ರಿಯ ನಾಟಕವಾಗಿ ರೂಪಾಂತರಗೊಳಿಸಿದ್ದಾರೆ . ಹಬೀಬ್ ರವರು ಒಬ್ಬ ಖ್ಯಾತ ರಂಗ ನಿರ್ದೇಶಕ, ಲೇಖಕ, ನಾಟಕಕಾರರು ಹಾಗು ನಟರು. ೧೯೭೫ ರಲ್ಲಿ ಈ ಜಾನಪದ ನಾಟಕವೊಂದನ್ನು ರಚಿಸುತ್ತಾರೆ. ಆ ಕಾಲಕ್ಕೆಇದೊಂದು ಹೆಸರುವಾಸಿಯಾದಂತಹ ನಾಟಕ. ಇದಲ್ಲದೆ, ಉತ್ತರಕರ್ನಾಟಕದ “ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ” ಅವರು ಒಬ್ಬ ಖ್ಯಾತ ಕವಿ, ನಾಟಕಕಾರ ಮತ್ತು ಸಾಹಿತ್ಯ ರಚನೆಕಾರ. ಅವರದ್ದೇ ಆದ ಜಾನಪದ ಗೀತೆಗಳನ್ನು ಕಟ್ಟಿ, ಈ ನಾಟಕವನ್ನು  ಪ್ರಥಮವಾಗಿ ಕನ್ನಡ ಭಾಷೆಗೆ ಅನುವಾದಿಸಿ ರೂಪಾಂತರಗೊಳಿಸಿದ ಹೆಮ್ಮೆ ಇವರಿಗೆ ಸಲ್ಲುತ್ತದೆ. ಜಾನಪದ ಕಲೆ, ಸಂಗೀತ, ನೃತ್ಯ, ಇವೆಲ್ಲವನ್ನೂ ಪ್ರತಿಬಿಂಬಿಸೋ ನಾಟಕವಾಗಿದೆ. ಈ ಒಂದು ಅದ್ಭುತ ನಾಟಕವನ್ನು ಕರ್ನಾಟಕ ಜನರಿಗೂ ತಲುಪುವಂತೆ ಮಾಡಿದ ಹೆಗ್ಗಳಿಕೆ ಡಾ.ಸಿದ್ದಲಿಂಗ ರವರದು.

ಒಂದು ದಿನ ಚರಣದಾಸ ಒಬ್ಬ ಗುರುವಿಗೆ ಭೇಟಿ ನೀಡಿ, ನಾನು ನಿಮ್ಮ ಶಿಷ್ಯನಾಗಬೇಕೆಂದು ಕೇಳಿಕೊಳ್ಳುತ್ತಾನೆ. ಕೇವಲ ಒಂದು ಪ್ರತಿಜ್ಞೆ ಮಾಡು ನಾನು ನಿನ್ನ ಗುರು ಆಗುವೆ ಎಂದು ಹೇಳಿದರು.

ಚರಣದಾಸ ಒಬ್ಬ ಅಸಾಧಾರಣ ತತ್ವಗಳನ್ನು ಹೊಂದಿರುವ ವ್ಯಕ್ತಿ, ಪ್ರತಿಜ್ಞೆ ಎಂಬ ಬಲೆಯಲ್ಲಿ ಸಿಲುಕಿಹಾಕಿಕೊಂಡಿದ್ದಾನೆ.

ಯಾಕೆ ಗುರುದೇವ ಬರೀ ಒಂದೇ ಪ್ರತಿಜ್ಞೆ? ನಾನು ನಾಲ್ಕು ಪ್ರತಿಜ್ಞೆಗಳನ್ನು ಮಾಡುತ್ತೇನೆ ಮೊದಲನೆಯದಾಗಿ ನಾನು ಎಂದಿಗೂ ಚಿನ್ನದ ತಟ್ಟೆಯಲ್ಲಿ ಊಟ ಮಾಡುವುದಿಲ್ಲ, ಎರಡನೆಯದಾಗಿ ಆನೆಯ ಮೇಲೆ ಕುಳಿತು ಎಂದೂ ಗೌರವಾರ್ಥವಾಗಿ ಮೆರವಣಿಗೆಯಲ್ಲಿ ಮುನ್ನಡೆಯುದಿಲ್ಲ, ಮೂರನೆಯದಾಗಿ ಇಡೀ ದೇಶದ ಜನರು ಒಟ್ಟಾಗಿ ಬಂದು ನನ್ನ ರಾಜನಾಗು ಎಂದರು ನಾನು ರಾಜನಾಗಲು ನಿರಾಕರಿಸುವೆ, ನಾಲ್ಕನೆಯದು ರಾಣಿ ಬಂದು ನನ್ನ ವರಿಸಿಕೋ ಎಂದು ಕೇಳಿದರೂ, ಆಕೆ ಯುವ ಕನ್ಯೆ ಆಗಲಿ ಸೌಂದರ್ಯವತಿಯೇ ಇರಲಿ, ನಾನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ಈ ಬಲಶಾಲಿ ಕಳ್ಳ ಚರಣದಾಸ ಪ್ರತಿಜ್ಞೆ ಮಾಡುತ್ತಾನೆ.

ಇಷ್ಟು ಪ್ರತಿಜ್ಞೆ ಪೂರ್ತಿ ಆಗೋದು ಅಸಂಭವ ಎಂದು ಗುರುಗಳು ಆತನಿಗೆ ಹೇಳುತ್ತಾರೆ. ಹಗಲುಗನಸು ಬಿಟ್ಟು ಜೀವನದಲ್ಲಿ  ಬೇರೆ ಏನಾದರೂ ಹೊಸತು ಸೇರಿಸಿಕೋ, ಸುಳ್ಳು ಹೇಳುವುದನ್ನ ಬಿಡು ಎಂದು ಗುರುಗಳು ನಗುತ್ತಾರೆ.

ಒಂದು ಸಲ, ಚರಣದಾಸ ಒಬ್ಬ ಜಮೀನುದಾರನನ್ನು ದೋಚುತ್ತಾನೆ. ಈ ಒಂದು ಕಾರಣದಿಂದ ಸಣ್ಣ ಕಳ್ಳನಾಗಿದ್ದವನು ದೊಡ್ಡ ಜನಪ್ರಿಯ ಸ್ಥಾನಕ್ಕೆ ಏರುತ್ತಾನೆ.

ಈ ಹಿಂದೆ ಮಾಡಿದ ಕಳ್ಳತನದಿಂದ ಬಡ ರೈತರಿಗೆ ಸಹಾಯ ಮಾಡುತ್ತಾನೆ. ಕಳ್ಳನಿಂದ ಒಬ್ಬ ವ್ಯಕ್ತಿಯಾಗಿ ವಿಕಾಸನಗೊಳ್ಳುತ್ತಾನೆ. ಮಾನವೀಯ ಪ್ರವೃತ್ತಿ ಅವನನ್ನು ಒಳ್ಳೆಯತನ ಮತ್ತು ಉಪಕಾರದ ಹಾದಿಗೆ ತಳ್ಳುತ್ತದೆ. ಅವನು ಸಂಗ್ರಹಿಸಿದ ಧಾನ್ಯಗಳನ್ನು ಜನರಿಗೆ ಹಂಚುತ್ತಾನೆ. ಇಂತಹ ಕ್ಷಣದಲ್ಲಿ ಆ ಜಾಗದ ಬಡ ಜನರು ಸೇರಿ ಜಾನಪದವನ್ನು ಹಾಡುತಿದ್ದಾರೆ ಮತ್ತು ಇವರ ಜಾನಪದ ಹಾಡಲ್ಲಿ ಕೇಂದ್ರೀಕೃತವಾಗಿ ಚರಣದಾಸ ಕಳ್ಳನಲ್ಲ ಎಂದು ಹಾಡುತಿದ್ದಾರೆ.

ಚರಣದಾಸನು ಕಳ್ಳತನಕ್ಕೂ ಅಂಟಿಕೊಂಡಿದ್ದು, ಶಪಥಕ್ಕೂ  ಸಿಲುಕಿಕೊಂಡಿದ್ದಾನೆ. ಇವನ ಕೇವಲ ಒಂದು ಆಸೆ ಉಳಿದಿದೆ. ಅದು ರಾಜರ ಖಜಾನೆ ದೋಚುವುದು. ಇದನ್ನು ಮಾಡದಿದ್ದರೆ ನಾನು ಚೋರ ಚರಣದಾಸನೇ ಅಲ್ಲ ಎಂದು ಹೇಳುತ್ತಾನೆ.

ಒಂದು ದಿನ ರಾಜರ ಖಜಾನೆಗೆ ಪ್ರವೇಶಿಸಿ, ಅಲ್ಲಿದ್ದ ವಜ್ರ ವೈಢೂರ್ಯಗಳು, ಚಿನ್ನದ ಇಟ್ಟಿಗೆಗಳನ್ನು, ಅಮೂಲ್ಯ ಬೆಲೆಬಾಳುವ ಕಲ್ಲು ರತ್ನಗಳನ್ನು ನೋಡುತ್ತಾನೆ. ಆದರೆ ಏನೂ ಮುಟ್ಟುವುದಿಲ. ಕೇವಲ ೫ ನಾಣ್ಯಗಳನ್ನು ತೆಗೆದುಕೊಂಡು ಬರುತ್ತಾನೆ.

ರಾಣಿಯು ಎಲ್ಲ ಸೈನಿಕರು, ಕುದುರೆಗಳನ್ನು ಮತ್ತು ಆನೆ ಕಳುಹಿಸಿ, ಮೆರವಣಿಗೆ ಮೂಲಕ ಚರಣದಾಸನನ್ನು ಕರೆ ತರಲು ಆದೇಶಿಸುತ್ತಾಳೆ. ಮೆರವಣಿಗೆ ಏರಲು ಸಿದ್ಧನಾಗುತಿದ್ದ ಚರಣದಾಸನಿಗೆ ತಕ್ಷಣ ಗುರುಗಳಿಗೆ ನೀಡಿದ ಪ್ರತಿಜ್ಞೆ ನೆನಪಾಗುತ್ತದೆ. ನಂತರ ಇದನ್ನು ನಿರಾಕರಿಸಿ  ಆ ಸೈನ್ಯವನ್ನು ಹೊರಡಲು ಹೇಳುತ್ತಾನೆ.

ರಾಣಿಯು ಚಿನ್ನದ ತಟ್ಟೆಯಲ್ಲಿ ಊಟ ತಂದು ತಿನ್ನಿಸಿದಾಗ, ತನ್ನ ಇನ್ನೊಂದು ಪ್ರತಿಜ್ಞೆ ನೆನೆದು ಬಾಯಿಂದ ಹೊರಹಾಕುತ್ತಾನೆ. ಇದನ್ನು ಅವಮಾನವಾಯಿತೆಂದು ರಾಣಿ ಚರಣದಾಸನಿಗೆ ಕಂಬಿಗಳ ಹಿಂದೆ ಇರಿಸಲು ಸೈನಿಕರಿಗೆ ಆದೇಶ ನೀಡುತ್ತಾಳೆ.

ಆಕೆ ಮಾಡಿದ್ದು ಸರಿ ಅಲ್ಲ ಅಂದುಕೊಂಡು ಚರಣದಾಸನನ್ನು ಮರಳಿ ಕರೆತರಿಸುತ್ತಾಳೆ. ನಂತರದ ವಿಚಾರಣೆಯಲ್ಲಿ, ರಾಣಿ ಅವನ ಸತ್ಯವಂತಿಕೆಯನ್ನು ಮೆಚ್ಚಿ, ನನ್ನ ಮದುವೆ ಆಗುತ್ತೀಯ ಎಂದು ಕೇಳಿದಾಗ, ತಾನು ಗುರುಗಳಿಗೆ ಕೊಟ್ಟ ಭಾಷೆಯನ್ನು ನೆನೆಪಿಸುಕೊಂಡು ಇಲ್ಲಾ ನಾನು ನಿನ್ನ ವರಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾನೆ.

ಈ ಮಾತನ್ನು ಕೇಳಿಸಿಕೊಂಡ ರಾಣಿ, ಸರಿ ನಾನು ಇನ್ನೆಂದೂ ಮುದುವೆ ಆಗು ಅಂತ ಕೇಳುವುದಿಲ್ಲ. ಆದರೆ ಅದರ ಬದಲಿಗೆ ನನ್ನದೊಂದು ವಿನಂತಿ ಒಪ್ಪಿಕೊಳ್ಳುವಂತೆ ಕೇಳುತ್ತಾಳೆ. ಅದೇನದು? ಎಂದು ಚರಣದಾಸ ಕೇಳಿದಾಗ, ನಮ್ಮ ನಡುವೆ ಏನಾಗಿದೆ ಎಂದು ಯಾರಿಗೂ ಬಹಿರಂಗ ಪಡಿಸಬೇಡ ಎಂದು ಭರವಸೆ ಕೊಡು ಎಂದು ಹೇಳುತ್ತಾಳೆ. ಆದರೆ ಚರಣದಾಸ ಸತ್ಯ ಹೇಳುವೆನೆಂಬ ಪ್ರತಿಜ್ಞೆಯನ್ನು ನೆನಪಿಸುತ್ತಾನೆ.

ಪ್ರಾಮಾಣಿಕ ಕಳ್ಳ ತನ್ನ ಜೀವನವನ್ನು ತ್ಯಜಿಸಿ, ಜೀವನದ ಮೌಲ್ಯಗಳನ್ನು ಅಮರಗೊಳಿಸುತ್ತಾನೆ. ದುರಾದೃಷ್ಟವತ್, ಸಾಮಾನ್ಯ ವ್ಯಕ್ತಿಯಾಗಿದ್ದ ಈ ನಾಟಕದ ನಾಯಕ, ಸತ್ಯತೆಗಾಗಿ ಜೀವ ಬಿಡುತ್ತಾನೆ.

ಒಳ್ಳೆಯದು ಮತ್ತು ಕೆಟ್ಟದು, ಇದು ನಾಟಕಕಾರನ ಆಳವಾದ ಬದ್ಧತೆ ಮತ್ತು ಮಾನವೀಯ ದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ.

ಈ ನಾಟಕದ ವಿನ್ಯಾಸನಿರ್ದೇಶನ ಮತ್ತು ಸಂಗೀತ ನಿರ್ದೇಶಕರ ಬಗ್ಗೆ:

ನೀನಾಸಂ ರಂಗ ಶಿಕ್ಷಣ ಕೇಂದ್ರದಲ್ಲಿ ಪದವಿ ಪಡೆದಿರುವ ಖ್ಯಾತ ದಂಪತಿಗಳು, ಧರ್ಮೇಂದ್ರ ಅರಸ್ ಮತ್ತು ಎಸ್.ಡಿ ಶೈಲಶ್ರೀ ಯವರು ೩೦ ವರ್ಷಗಳಿಂದ ರಂಗಭೂಮಿ, ಕಿರುತೆರೆ, ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ದಂಪತಿ “ಟೆಂಟ್ ಸಿನಿಮಾ ಶಾಲೆಯಲ್ಲಿ” ಮುಖ್ಯ ನಟನಾ ಅಧ್ಯಾಪಕರಾಗಿ ಈ ಸಾಲಿನ, ವಿದ್ಯಾರ್ಥಿಗಳಿಗೆ ರಂಗಭೂಮಿ, ರಂಗ ನಟನೆ ಮತ್ತು ರಂಗ ಗೀತೆಗಳ ಪರಿಚಯ ಹಾಗು ಅನುಭವಕ್ಕಾಗಿ ಈ ನಾಟಕವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಎಸ್.ಡಿ. ಶೈಲಶ್ರೀ ರವರು ರಂಗ ಗೀತೆ ಹಾಡುವುದರಲ್ಲಿಯೂ ಸಹ ತಮ್ಮನ್ನು ತಾವು ಕಲಾ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಶ್ರೀ ಬಿ.ವಿ. ಕಾರಂತರ ಜೊತೆಯಲ್ಲಿ ಕೆಲಸಮಾಡಿ ಅನುಭವ ಪಡೆದಿದ್ದಾರೆ. ಅನೇಕ ಧಾರವಾಹಿಗಳು ಮತ್ತು ಸಿನಿಮಾಗಳಲ್ಲೂ ಬಣ್ಣ ಹಚ್ಚಿರುವ ಇವರು, “ವಠಾರ” ಎಂಬ ಪ್ರಸಿದ್ಧ ಕಿರುತರೆ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಸಾವಿರಕ್ಕೂ ಹೆಚ್ಚಿನ ಸಂಚಿಕೆಯಲ್ಲಿ ಕಾಣಿಸಿಕೊಂಡು ಜನ-ಮನ ಗೆದ್ದು ಹೆಸರುವಾಸಿಯಾಗಿದ್ದಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s