‘Udbhava’, a play by students of Tent Cinema’s Diploma in Acting course

“ನೈಜತೆ, ಕುಚೇµÉÖ, ಅಪಹಾಸ್ಯ, ತರ್ಕಕ್ಕೆ ನಿಲುಕಿದರೂ ಕೇಳದ ಪ್ರಶ್ನೆಗಳು ಅಂತರ್ಗತವಾದ ಈ ಕಾದಂಬರಿಯನ್ನು ದೃಶ್ಯ, ಶ್ರವ್ಯ ಮಾಧ್ಯಮದಲ್ಲಿ ನೋಡುವುದು ಸಗ್ಗ ಸುಖವೇ ಸರಿ.” ಎಂದು ವಿದ್ವಾA¸Àರಿಂದ ಹಿಡಿದು ಸಾಮಾನ್ಯನವರೆಗೂ ಎಲ್ಲರೂ ಹೇಳಿದ ಮೇಲೆ ಸಾಹಿತ್ಯ ಪಂಡಿತರಾದ ವೈಕುಂಠರಾಜುರವರು ಬರೆದ, ನಮ್ಮ ಪರಿಸರದ ಜನತೆಯ ಸ್ವಾರ್ಥ ಮೌಲ್ಯಗಳಿಗೆ ಕನ್ನಡಿ ಹಿಡಿಯುವಂತಹಾ “ಉದ್ಭವ” ಎಂಬ ಕಾದಂಬರಿಯನ್ನು, ಯಶಸ್ವಿಯಾಗಿ ಸಾಹಿತ್ಯವನ್ನು ಕಲಿತು, ದೆಹಲಿಯಲ್ಲಿ ರಂಗಭೂಮಿಯ ತಾಲೀಮನ್ನು ಪಡೆದ ಶ್ರೀನಿವಾಸ ಪ್ರಭುರವರು ನಾಟಕವನ್ನಾಗಿ ರೂಪಾಂತರಿಸಿದರು.

ಎಂಬತ್ತರ ದಶಕದಿಂದ ಇಂದಿನವರೆಗೂ ಸಾಹಿತ್ಯಕ್ಕೆ ದೃಶ್ಯ ಶ್ರವ್ಯ ಮಾಧ್ಯಮಗಳು ಪೈಪೋಟಿ ಕೊಟ್ಟು ನೋಡುಗರನ್ನು ಗೆಲಿಸಿತು ನಮ್ಮ “ಉದ್ಭವ”. ಜನತೆಯ ಮೂಢನಂಬಿಕೆ ಶ್ರದ್ಧೆಗಳನ್ನು ಉಪಯೋಗಿಸಿಕೊಂಡು ವ್ಯವಸ್ಥೆ ಹೇಗೆ ತನ್ನ ಜಾಲ ಹರಡುತ್ತದೆಂಬುದು ಉದ್ಭವದ ಕೇಂದ್ರ. ಈಗಿನ ರಾಜಕೀಯ ವಿದ್ಯಾಮಾನಗಳನ್ನು ನೋಡುತ್ತಿದ್ದರೆ ಈ ಎಂಬತ್ತರ ನಾಟಕ ಈಗೊಂದೆ ಅಲ್ಲದೇ, ಮುಂದೂ ಕೂಡ ಪ್ರಸ್ತುತವಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

ಹಾಗಾದರೆ “ಉದ್ಭವ”ವಾಗಿದ್ದು ಎಲ್ಲಿ? ಯಾವಾಗ? ಏನು? ಹೇಗೆ?

ಸಾಮಾನ್ಯವಾದ ಊರಿನ ಅತಿ ಸಾಮಾನ್ಯ ರಸ್ತೆಯೇ ಇಲ್ಲಿನ ಕಥಾ ವಸ್ತು. ಎಲ್ಲಾ ಊರಿನಲ್ಲೂ ಇದ್ದಂತೆ ಇಲ್ಲಿಯೂ ‘ರಾಘಣ್ಣ’ ನಿದ್ದಾನೆ. ಇವನು ಆಕಡೆ ನೇರವಾದ ರಾಜಕಾರಣಿಯೂ ಅಲ್ಲದ, ಈಕಡೆ ಸಾರ್ವಜನಿಕನೂ ಅಲ್ಲದ ಮಧ್ಯವರ್ತಿ. ಸತ್ಯಹರಿಶ್ಚಂದ್ರನನ್ನೇ ಪಳಗಿಸಿ ಅವನ ಹತ್ತಿರವೇ ಸುಳ್ಳಿನ ಹಾರ ನೆಯ್ಯಿಸುವ, ಅಹಿಂ¸Á ತತ್ವದ ಮಹಾತ್ಮ ಗಾಂಧಿಯನ್ನೇ ಬದಲಿಸಿ, ತನಗೇ ಗೊತ್ತಿಲ್ಲದಂತೆ ಊರುಗೋಲಲ್ಲಿ ಕೊಲೆ ಮಾಡಿಸುವಂತಹಾ ಕಲೆ ಹೊಂದಿರುವ ವ್ಯಕ್ತಿಯೇ ನಮ್ಮ ರಾಘಣ್ಣ. “ಈ ದೇಶದಲ್ಲಿ ಬದುಕಬೇಕು ಅಂದ್ರೆ ರಾಜಕೀಯ ಮಾಡಬೇಕು, ಇಲ್ಲಾ ಜೀತದಾಳಾಗಬೇಕು.” ಎನ್ನುತ್ತಲೇ ತನ್ನ ದಿನ ಆರಂಭಿಸುವ ಈ ರಾಘಣ್ಣ ಪದೇ ಪದೇ ಅಪಘಾತಕ್ಕೊಳಗಾಗುತ್ತಿದ್ದ ರಸ್ತೆಯನ್ನು ತನ್ನ ಲಾಭಕ್ಕೆ ಬಳಸಿಕೊಳ್ಳಲು ಯೋಚಿಸುತ್ತಾನೆ. “ಈ ರಸ್ತೆ ಅUÀ®ªÁಗುತ್ತದಂತೆ ಹೌದಾ?” ಎನ್ನುವ ಪ್ರಶ್ನೆಯನ್ನು ತನ್ನ ಚೇಲಾಗಳ ಮೂಲ ಜನರ ಕಿವಿಗೆ ಮುಟ್ಟಿಸುತ್ತಾನೆ. ಅಂಗಡಿಯ ಎದುರಿಗೆ ಆಟೋ ಲಾರಿಗಳು ಗುದ್ದಿಕೊಂಡು ರಕ್ತದ ಹೊಳೆ ಹರಿಯುತ್ತಿದ್ದರೂ ನೋಡುತ್ತಾ, ಆಖಳಿಸುತ್ತಾ ತಮ್ಮ ಕೆಲಸದಲ್ಲಿ ಮಗ್ನರಾಗುತ್ತಿದ್ದ ಮಳಿಗೆ, ಅಂಗಡಿ, ಮೆಕಾನಿಕ್ಕುಗಳೂ ಈ ಪ್ರಶ್ನೆಯನ್ನು ಕೇಳಿ ದಂಗಾಗಿ, ಊರನ್ನೇ ಅಲ್ಲೋಲಕಲ್ಲೋಲ ಮಾಡುವಂತವರಾಗಿ ನಮ್ಮ ರಾಘಣ್ಣನ ಹತ್ತಿರ ಸಹಾಯ ಕೇಳಿಕೊಂಡು ಬರುತ್ತಾರೆ. ರಾಘಣ್ಣನ ಬುದ್ದಿವಂತಿಕೆಗೆ ಊರಿನ ಲೋಕಲ್ ರಾಜಕೀಯವೂ ಇದಕ್ಕೆ ಸೇರಿ, ಗಾಂಧಿವಾದಿಯನ್ನೂ ತನ್ನ ಬಳಿ ಎಳೆದುಕೊಂಡು ಊರಿನ ಕಥೆಯನ್ನು ಮುಂದುವರೆಸುತ್ತಾನೆ.

ಒಂದು ಬದಿಯವರು ಹೆಚ್ಚು ಹಣಕೊಟ್ಟು ಪರಿಹಾರ ಕೇಳಿದಾಗ, ಮರುದಿನವೇ ಆಕಡೆಯಲ್ಲಿ ವಿಘ್ನ ನಿವಾರಕ ಗಣಪತಿ “ಉದ್ಭವವಾಗುತ್ತಾನೆ.” ದೇವರು ಕಷ್ಟಕಾಲದಲ್ಲಿ ಕೈ ಹಿಡಿಯದಿದ್ದರೆ ಇನ್ಯಾವಾಗ ಹಿಡಿಯುತ್ತಾನೆ ಅಲ್ಲವೇ? ಸ್ವಲ್ಪ ಶಾಂತಿ ಮನೆ ಮಾಡುತ್ತದೆ. ಜೊತೆಜೊತೆಗೆ ಏಳುಬಿಳುವ ಕಥೆಯೂ ಮುಂದುವರೆಯುತ್ತದೆ. ಆದರೆ ಸ್ವಲ್ಪದರಲ್ಲೇ ಮತ್ತೊಂದು ಸಮಸ್ಯೆ ಎದಿರಾಗುತ್ತದೆ.

ಗಣಪತಿಯ ಉದ್ಭವವೂ ಆಯಿತು, ಸರ್ಕಾರದವರು ಈ ಬದಿ ಅಗಲಾ ಮಾಡುವುದನ್ನು ನಿಲ್ಲಿಸಿಯೂ ಆಯಿತು. ಆದರೆ ಮತ್ತೊಂದು ಕಡೆ?

“ಈ ಕಡೆ, ಆಕಡೆಗಿಂತಾ ಜಾಸ್ತಿ ರಸ್ತೆ ಅಗಲವಾಗುತ್ತಂತೆ ಹೌದಾ?”

ಉತ್ತಮ ಯಾವುದಯ್ಯಾ? ನಟನೆಯೋ, ನಿರ್ದೇಶನೆಯೋ, ನಿರ್ಮಾಣ, ಸಾಹಿತ್ಯವೋ? ಎನ್ನುವ ಹುಚ್ಚು ಪ್ರಶ್ನೆಯ ಕುದುರೆಯನ್ನೇರಿದರೆ ದಕ್ಕುವುದು ಮೂರೇ ಉತ್ತರಗಳು. “ಎಲ್ಲವೂ.. ಎಲ್ಲವೂ… ಎಲ್ಲವೂ.” ಹಾಗಾದರೆ ಇವೆಲ್ಲದಕ್ಕೂ ಕಾರಣವಾದವರ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ. ಟೆಂಟ್ ಸಿನೆಮಾದ ಮೂಲಕ ಈ ನಾಟಕವನ್ನು ವಿನ್ಯಾಸ, ನಿರ್ದೇಶನ ಮತ್ತು ಸಂಗೀತ ನಿರ್ದೇಶಕನ ಮಾಡಿ ಮೋಡಿ ಮಾಡಿದವರ ಬಗ್ಗೆ ಹೇಳುವುದಾದರೆ ನೀನಾಸಂ ರಂಗ ಶಿಕ್ಷಣ ಕೇಂದ್ರದಲ್ಲಿ ಪದವಿ ಪಡೆದಿರುವ ಖ್ಯಾತ ದಂಪತಿಗಳು, ಧರ್ಮೇಂದ್ರ ಅರಸ್ ಮತ್ತು ಎಸ್. ಡಿ ಶೈಲಶ್ರೀ ರವರು. ೩೦ ವರ್ಷಗಳಿಂದ ರಂಗಭೂಮಿ, ಕಿರುತೆರೆ, ಸಿನಿಮಾಗಳಲ್ಲಿ ನಟಿಸಿ, ಪ್ರಶಂಸೆಗಳನ್ನೂ, ಪ್ರಶಸ್ತಿಗಳನ್ನೂ zÀಕ್ಕಿಸಿಕೊಳ್ಳುವುದರ ಜೊತೆಗೆ ಧರ್ಮೇಂದ್ರರವರು ಟೆಂಟ್ ಸಿನಿಮಾ ಶಾಲೆಯಲ್ಲಿ ಮುಖ್ಯ ನಟನಾ ಅಧ್ಯಾಪಕರಾಗಿ ವಿದ್ಯಾರ್ಥಿಗಳಿಗೆ ರಂಗಭೂಮಿ, ರಂಗ ನಟನೆ ಮತ್ತು ರಂಗ ಗೀತೆಗಳ ಪರಿಚಯ ಮಾಡಿಕೊಡುತ್ತಾ ಬಂದಿದ್ದಾರೆ. ಶ್ರೀ ಬಿ.ವಿ. ಕಾರಂತರ ಜೊತೆಯಲ್ಲಿ ಕೆಲಸಮಾಡಿ ಅನುಭವ ಪಡೆದ ಎಸ್.ಡಿ. ಶೈಲಶ್ರೀ ರವರು ರಂಗ ಗೀತೆ ಹಾಡುವುದರಲ್ಲಿ  ನಿಪುಣರೂ ವಿಖ್ಯಾತಿಗಳೂ ಆಗಿದ್ದಾರೆ. ಅನೇಕ ಧಾರವಾಹಿಗಳು ಮತ್ತು ಸಿನಿಮಾಗಳಲ್ಲೂ ಬಣ್ಣ ಹಚ್ಚಿರುವ ಇವರು, “ವಠಾರ” ಎಂಬ ಪ್ರಸಿದ್ಧ ಕಿರುತರೆ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಸಾವಿರಕ್ಕೂ ಹೆಚ್ಚಿನ ಸಂಚಿಕೆಯಲ್ಲಿ ಕಾಣಿಸಿಕೊಂಡು ಜನ ಮನ ಗೆದ್ದು ಹೆಸರುವಾಸಿಯಾಗಿದ್ದಾರೆ. ಇನ್ನು ಉದ್ಭವ ನಾಟಕದ ಕಲೆ ಮತ್ತು ಬೆಳಕಿನ ವಿಭಾಗದವರು ಶಿವ ಕಾಗೆವಾಡ ಮತ್ತು ಅಮೋಘ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s